ನಮ್ಮ ಕುರಿತು

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ - KTVA

ಕಿರುತೆರೆಯಲ್ಲಿರುವ ಎಲ್ಲಾ ಶ್ರಮಜೀವಿಗಳ ಏಳಿಗೆಗಾಗಿ…

ಮನುಷ್ಯ ಹುಟ್ಟಿದಾಗ ಮಾತ್ರ ಒಂಟಿ, ಆನಂತರ ಹತ್ತು ಹಲವಾರು ಸದಸ್ಯರಿರುವ ಕುಟುಂಬದಿಂದ ಹಿಡಿದು ಶಾಲೆ, ಕಛೇರಿ ಹೀಗೆ ತಾನು ಹೋದಲ್ಲೆಲ್ಲಾ ಸಾಕಷ್ಟು ಸ್ನೇಹ ಬಳಗ ಹೊಂದಿ ಸಂಘ ಜೀವಿಯಾಗಿದ್ದಾನೆ. ಮನುಷ್ಯ ಒಂಟಿಯಾಗಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಒಂಟಿಯಾಗಿ ಬದುಕಲು ಸಾದ್ಯವಿಲ್ಲ. ಒಂಟಿಯಾಗಿ ನಡೆದಷಷ್ಟೂ ದಣಿವು ಜಾಸ್ತಿ, ಮಾನವನಾಗಿ ಹುಟ್ಟಿದ ಮೇಲೆ ಬಡವನಿರಲಿ ಶ್ರೀಮಂತರಿರಲಿ ಎಲ್ಲರಿಗೂ ಸುಖ ದುಖಃ, ನೋವು ನಲಿವು ಎಲ್ಲವೂ ಸರ್ವೇ ಸಾಮಾನ್ಯ. ನಮಗೆ ಖುಷಿಯಾದಾಗ ಅದನ್ನು ವ್ಯಕ್ತಪಡಿಸುವುದಕ್ಕಾದರೂ ನಮ್ಮದೇ ಆದ ಒಂದು ಸಂಘ ಬೇಕು, ದುಃಖದಲ್ಲಿದ್ದಾಗ ನಮ್ಮ ಅಳಲನ್ನು ತೋಡಿಕೊಳ್ಳಲು ಒಂದಷ್ಟು ಜನರ ಅಗತ್ಯ ನಮ್ಮೆಲ್ಲರಿಗೂ ಖಂಡಿತ ಇದೆ. ಅದರಂತೆ ಕಿರುತೆರೆಯಲ್ಲಿರುವ ಎಲ್ಲಾ ಶ್ರಮಜೀವಿಗಳ ಏಳಿಗೆಗಾಗಿಯೇ ಇರುವ ಸಂಘವೇ ನಮ್ಮ ಈ ಕೆಟಿವಿಎ.

ಕೆಟಿವಿಎ ಏಕೆ ಬೇಕು?

ಕೆಟಿವಿಎ ಸದಸ್ಯತ್ವ ಏಕೆ ಪಡೆಯಬೇಕು ಎಂಬ ಪ್ರಶ್ನೆ ಹಲವಾರು ಜನರಲ್ಲಿ ಮೂಡಿರುತ್ತದೆ. ಕೆಟಿವಿಎ ಸದಸ್ಯತ್ವ ಪಡೆಯುವುದರಿಂದ ಖಂಡಿತ ನಿಮಗೆ ಲಾಭವಿದೆ. ಎಲ್ಲರೂ ದಿನನಿತ್ಯ ಅವರವರ ಕೆಲಸದ ಒತ್ತಡದ ಮಧ್ಯೆಯೂ ಕೆಟಿವಿಎ ಎಲ್ಲರನ್ನು ಒಟ್ಟುಗೂಡಿಸಲು ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ನಾವು ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಖುಷಿ ಪಡಬಹುದು. ಎಲ್ಲರೊಟ್ಟಿಗೆ ಕಾಲ ಕಳೆಯಬಹುದು. ಒಟ್ಟಾರೆಯಾಗಿ ನಾವೆಲ್ಲರೂ ಒಗ್ಗಟ್ಟಾಗಿರಬಹುದು. ಸ್ವಲ್ಪ ದಿನಗಳ ಹಿಂದೆಯಷ್ಟೇ 2022-23ನೇ ಸಾಲಿನ ಕ್ರಿಕೆಟ್ ಟೂರ್ನಮೆಂಟ್ ಅನ್ನು ಕೆಟಿವಿಎ ಹಮ್ಮಿಕೊಂಡಿತ್ತು. ಅದರಲ್ಲಿ ಎಲ್ಲರೂ ಭಾಗವಹಿಸಿದ್ದ ರೀತಿ ಶ್ಲಾಘನೀಯ. ಈ ಟೂರ್ನಮೆಂಟ್ ಯಶಸ್ವಿ ಹಿನ್ನಲೆ ಮುಂದಿನ ದಿನಗಳಲ್ಲಿ ಲೆದರ್ ಬಾಲ್ ಟೂರ್ನಮೆಂಟ್, ಬ್ಯಾಡ್ಮಿಂಟನ್ ಟೂರ್ನಮೆಂಟ್, ಕೇರಮ್ ಟೂರ್ನಮೆಂಟ್‌ಗಳನ್ನು ಆಯೋಜಿಸುವ ಸಕಲ ಕಾರ್ಯಗಳು ಪ್ರಗತಿ ಪಥದಲ್ಲಿ ಸಾಗುತ್ತಿವೆ. ಅಷ್ಟೆಲ್ಲದೇ ಚಿತ್ರೀಕರಣದಲ್ಲಿ ತೊಂದರೆಗಳಾದಲ್ಲಿ ಕೆಟಿವಿಎ ಸದಾ ನಿಮ್ಮೆಲ್ಲರ ಬೆಂಬಲಕ್ಕಿರುತ್ತದೆ ಹಾಗೂ ನಾವುಗಳು ಈ ಸಮಾಜದ ಒಂದು ಭಾಗವಾಗಿರುವುದರಿಂದ ಸಾಮಾಜಿಕ ಕಳಕಳಿಯ ಒಂದಷ್ಟು ಕೆಲಸಗಳನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು. ಬಡ ಕಲಾವಿದರಿಗೆ, ತಂತ್ರಜ್ಞರಿಗೆ ಆರ್ಥಿಕ ನೆರವು ನೀಡುವ ಮುಖಾಂತರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವ ಕಡೆಯೂ ಕೆಲಸ ಮಾಡುತ್ತದೆ ನಮ್ಮ ಕೆಟಿವಿಎ.

ನಾವು ಸಂಘಟನೆಗೆ ಭಾಗಿಯಾಗದೆ ಅನಾಮಿಕರಾಗಬೇಕೆ??

Tv ಉದ್ಯಮ ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ಕನ್ನಡ ದೂರದರ್ಶನದ ಆರಂಭದ ದಿಗ್ಗಜರಿಂದ, ಕಾರ್ಮಿಕರ ಕಲಾವಿದರ, ತಂತ್ರಜ್ಞರ, ಕ್ಷೇಮಾಭಿವೃದ್ಧಿಗಾಗಿ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (KTVA) ಸ್ಥಾಪಿಸಿ, ಇಂದು ಅದರ ಚುಕ್ಕಾಣಿಯನ್ನು ನಮ್ಮ ಯುವತಂಡಕ್ಕೆ ನೀಡಿ ಮುನ್ನಡೆಸುವ ಜವಾಬ್ದಾರಿಯುತ, ಗುರುತರವಾದಂತ ದೊಡ್ಡ ಸಂಘಟನೆಯನ್ನು ನೀಡಿದೆ.

ಇಂದು ಕನ್ನಡ ಭಾಷೆಯಲ್ಲಿ 26 ವಾಹಿನಿಗಳು ಪ್ರಸಾರಗಳ್ಳುತ್ತಿವೆ, GEC(general entertainment channels)ಆರು, ವಾರ್ತಾವಾಹಿನಿಗಳು ಒಂಬತ್ತು, ಸದ್ಯದಲ್ಲೇ ಮತ್ತೊಂದು ವಾರ್ತಾ ವಾಹಿನಿ ಸೇರ್ಪಡೆ ಆಗಲಿದೆ. ಸಿನೆಮಾ ಮತ್ತು music ಎಂಟು, ಹಾಸ್ಯಕ್ಕೆ ಒಂದು ಕ್ರೀಡೆಗೊಂದು, ಹೀಗೆ ಭಿನ್ನ ವಿಧದಲ್ಲಿ ಮನರಂಜನೆಯ TV ಉದ್ಯಮ ಹಬ್ಬಿದೆ.

ಭಾರತದಲ್ಲಿ ಮೊದಲ ದೂರದರ್ಶನ 1959 ಸೆಪ್ಟೆಂಬರ್ 15 ರಂದು ಆರಂಭವಾಗಿ, ಜುಲೈ 7 1984 ರಿಂದ ಕಾರ್ಯಕ್ರಮಗಳು ಪ್ರಾರಂಭವಾದವು. ಪ್ರಾದೇಶಿಕ ಭಾಷೆಗಳ ದೂರದರ್ಶನ ಕೇಂದ್ರಗಳು ಕೂಡ ಅದೇ ವೇಳೆಗೆ ಆರಂಭವಾದವು. ಕನ್ನಡದ ದೂರದರ್ಶನ ಕೇಂದ್ರ ಗುಲ್ಬರ್ಗ ತದನಂತರ ಬೆಂಗಳೂರು ಕೇಂದ್ರ ಚಂದನವಾಗಿ ಅರಳಿ ಸಾಕಷ್ಟು ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಿತು.

Shri-Ravi-R-Garanin

ರವಿ ಆರ್ ಗರಣಿ

ಇಂತಹ ಉದ್ಯಮಕ್ಕೆ ಹಲವಾರು ತಂತ್ರಜ್ಞರ, ಕಲಾವಿದರ, ಕಾರ್ಮಿಕರ ಅಗತ್ಯವೆನಿಸಿದರೆ, ಇದೇ ಮನರಂಜನೆಯ ಉದ್ಯಮ ನಂಬಿದ ಪ್ರತ್ಯಕ್ಷ, ಪರೋಕ್ಷ ಹದಿನೈದು ಸಾವಿರಕ್ಕು ಹೆಚ್ಚಿನ ಕುಟುಂಬಗಳಿವೆ. ಅದು  ಮನರಂಜನೆಯ ವಾಹಿನಿಗಳು ಮಾತ್ರವೇ ಗುರುತಿಸಿಕೊಂಡರೆ, ಇನ್ನಿತರ ವಾಹಿನಿಗಳ ಲೆಕ್ಕಾಚಾರ ಲಕ್ಷ ದಾಟ ಬಹುದು.

Shri-Srujan-Lokesh

ಸೃಜನ್ ಲೋಕೇಶ್

ಸಂಘಟನೆ... ಯಾಕೆ ? ಹೇಗೆ? ಉಪಯೋಗವೇನು?

ಸಂಘಟನೆಯ ಅರ್ಥ ನಮ್ಮ ಭಾರತೀಯರಿಗೆ ತಿಳಿ ಹೇಳುವುದು ಪ್ರಸಕ್ತವೆನಿಸದು…ಆ ಶಕ್ತಿಯಿಂದಲೇ ನಾವಿಂದು ಸ್ವತಂತ್ರರಾಗಿದ್ದೇವೆ. ಆಹಾರ ಹುಡುಕುತ್ತ ಆನೆಗಳ ಹಿಂಡೆ ಸಂಘಟಿತವಾಗಿ ಹೊರುಡುವಾಗ, ಮೊದಲೇ ಮನುಷ್ಯ ಸಂಘ ಜೀವಿ, ಸ್ನೇಹ ಸಂಬಂಧಗಳ ಭಾವ ಜೀವಿ, ಸಂಘಟನೆಯಲ್ಲಿ ಒಂದು ಸ್ನೇಹಕ್ಕೆ, ಹಿತರಕ್ಷಣೆ, ಕ್ಷೇಮಾಭಿವೃದ್ಧಿಗೆ, ಒಂದು ಆತ್ಮಸ್ಥೈರ್ಯಕ್ಕೆ ಸಂಘಟನೆಯ ಅವಶ್ಯಕವಲ್ವೇ???

    • ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಜನರನ್ನು ಜಾಗೃತಗೊಳಿಸುವುದು
    • ವ್ಯಕ್ತಿಗಳು, ಗುಂಪುಗಳು ಮತ್ತು ಸಂಸ್ಥೆಗಳ ನಡುವೆ ಸಮನ್ವಯವನ್ನು ತರಲು ತಮ್ಮ ಗುರಿಯನ್ನು ಕೇಂದ್ರೀಕರಿಸಲು ಮತ್ತು ಅವರ ಉದ್ದೇಶಗಳನ್ನು ಪೂರೈಸಲು
    • ಸಂಘಟನೆಯ ಮೂಲ ಗುರಿ ಮತ್ತು ಉದ್ದೇಶವು ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವುದು, ಸಾಮಾನ್ಯ ಆಸಕ್ತಿ ಮತ್ತು ತ್ಯಾಗದ ಮನೋಭಾವವನ್ನು ಬೆಳೆಸುವುದು
    • ಸಮಸ್ಯೆಗಳು ಮತ್ತು ಅಗತ್ಯಗಳ ಬಗ್ಗೆ ಜನರಲ್ಲಿ ಉತ್ತಮ ತಿಳುವಳಿಕೆಯನ್ನು ಬೆಳೆಸುವುದು.
    • ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಅಗತ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು

ಮತ್ತೊಂದು ಪ್ರಮುಖ ಅಂಶ ಸಂಘಟನೆಯಿಂದ ನಮಗೆ ಏನು ಉಪಯೋಗ ಅನ್ನುವ ಪ್ರಶ್ನೆಗೆ ಮುಂಚೆ ಸಂಘಟನೆಗೆ ನಮ್ಮ ಕೊಡುಗೆ ಕೂಡ ಮುಖ್ಯ ಅಲ್ಲವೇ??
ಹತ್ತಾರು ಸ್ನೇಹಿತರ ಕೂಟ ಇದ್ದರೂ ಇಂತಹ ಬೃಹತ್ತಾದ ಉದ್ಯಮದ ಪಾಲುದಾರರಾದ ನಾವು ಸಂಘಟನೆಗೆ ಭಾಗಿಯಾಗದೆ ಅನಾಮಿಕರಾಗಬೇಕೆ??

ಸಂಘಟನೆಗೆ ಶಕ್ತಿಯಾಗೋಣ
ಸಂಘಟನೆಯಿಂದ ಶಕ್ತರಾಗೋಣ

Welcome Back!

Login to your account below

Retrieve your password

Please enter your username or email address to reset your password.

Add New Playlist